ಅಂತು ಇಂತೂ…. ಕನ್ನಡಕ್ಕೆ ಕರ್ನಾಟಕಕ್ಕೇ ಒಳ್ಳೆಯ ದಿನಗಳು ಹತ್ತಿರ ಬರುವ ಎಲ್ಲ ಮುನ್ಸೂಚನೆಗಳು ಕಂಡು ಬರುತ್ತಿವೆ.. ರಾಜಕೀಯದಲ್ಲಿ ಏರು ಪೆರು ಸಹಜವೇ ಆದರೆ ಈಗ ಸಂತಸದ ಸುದ್ದಿ ಬರ್ತಾ ಇರೋದು ಸಾಹಿತ್ಯದ ಲೋಕದಿಂದ. ಆದರೆ ಈ ಸುದ್ದಿ ಬರೋದು ಎಷ್ಟು ಬೇಗ? ಎನ್ನುವುದು ಕಾಲ ನಿರ್ಣಯ ಮಾಡಬೇಕಾಗಿದೆ.
ಆದರೆ ಈ ಸರ್ತಿ ಖಚಿತವಾದ ಗೆಲುವು ಕನ್ನಡದ್ದೇ, ಕರ್ನಾಟಕದ್ದೇ ನಮ್ಮ ಕನ್ನಡಿಗರದ್ದೇ.. ಇದೆಲ್ಲಕ್ಕೂ ಕಾರಣಪುರುಷ ಆದವರು ಧಾರವಾಡದ ಪ್ರೊ||ಎಸ್.ಶೆಟ್ಟರ್ ಅವರು. ಅವರ ಛಲ, ನಿರಂತರ ಪರಿಶ್ರಮ, ಶ್ರದ್ಧೆ ಹಾಗು ಕನ್ನಡ ನಾಡು ನುಡಿಯ ಬಗ್ಗೆ ಇರುವ ಕಾಳಜಿ,ಪ್ರೀತಿ. ಎಲ್ಲರೂ ಹತಾಶರಾಗಿ ಕುಳಿತ ಸಮಯದಲ್ಲಿ ವರ್ಷಾನುಗಟ್ಟಲೆ ಕಷ್ಟ ಪಟ್ಟು ಅಧ್ಯಯನ ಮಾಡಿ ಅವರು ಸಿದ್ಧ ಪಡಿಸಿದ ವರದಿಯನ್ನು ಇತರ ತಜ್ಞರೊಂದಿಗೆ ಹಂಚಿಕೊಂಡ್ಡಿದಾರೆ, ಇದರಿಂದ ಪುನಃ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನವನ್ನು ದೊರಕಿಸಿಕೊಡಲು ನಡೆಯುತ್ತಿದ್ದೆ ಧರ್ಮಯುದ್ಧಕ್ಕೆ ಇಮ್ಮಡಿ ಹುಮ್ಮಸ್ಸು ಬಂದಿದೆ.
ಕನ್ನಡಕ್ಕೆ ಯಾಕೆ ಶಾಸ್ತ್ರೀಯ ಸ್ಥಾನ ಸಿಗಬಾರದು ಎಂದು ೫ ಪುಟದ ವರದಿಯನ್ನು ಒಪ್ಪಿಸಿದ ತಮಿಳಿನ ಪ್ರೊ|| ಕುಳಂದೈ ಸ್ವಾಮಿಗೆ ಇವರ ವರದಿಯ ಜಾಡು ಹತ್ತಿ, ಇಷ್ಟು ವರ್ಷ ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಗಬಾರದು ಎಂದು ಕೂಗಾಡುತ್ತಿದ್ದ ಅವರ ನಿಲುವು ಕೂಡ ತಣ್ಣಗಾಗಿರುವುದು ಗಮನಾರ್ಹ. ಈಗ ಉಳಿದಿರುವ ಕಾರ್ಯ ಕೇವಲ ಆ ವರದಿಯನ್ನು ಸಿದ್ಧಪಡಿಸಲು ಆಧಿರಿಸಿದ ಲಿಖಿತ ಧಾಖಲೆಗಳು ಅಷ್ಟೆ. ಒಮ್ಮೆ ಒಪ್ಪಿಸಿದರೆಂದರೆ ಯಾರು ಕೂಡ ಇದರ ವಿರುದ್ಧ ಧ್ವನಿ ಎತ್ತುವ ಹಾಗಿಲ್ಲ, ಈ ಸರ್ತಿ ಆಗುವ ಚರ್ಚೆಯಲ್ಲಿ ಗೆಲುವು ನಮ್ಮದೇ ಎಂದು ವಿಶ್ವಾಸದಿಂದ ಬೀಗುವ ಪ್ರೊ|| ಎಸ್.ಶೆಟ್ಟರ್ ಅವರ ಪ್ರಶ್ನೆ ಏನೆಂದರೆ? ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ದೊರೆಯುವುದು ದೊಡ್ಡದಲ್ಲ ಆದರೆ ದೊರೆತ್ತದನ್ನು ಉಳಿಸಿಕೊಳ್ಳುವುದು ಹೇಗೆ? ಎನ್ನುವುದು.
ನಮ್ಮ ಕನ್ನಡದ ಕವಿರತ್ನಗಳಾದ ಪಂಪ,ರನ್ನ, ಪೊನ್ನ,ಹರಿಹರ, ರಾಘವಾಂಕರನ್ನು ಇತರ ಭಾಷೆಗಳಲ್ಲಿ ಪರಿಚಯಿಸುವ ಪರಿಪಾಠವೇ ಇಲ್ಲದಂತಾಗಿದೆ ಎಂಬುದೂ ಸಹ ಇವರ ಅಂಬೋಣ. ಆದರೆ ಪರಭಾಷೆಗಳಲ್ಲಿ ಪರಿಚಯಿಸುವುದರ ಜೊತೆಗೆ ನಮ್ಮವರಿಗೆ ಯಾವ ಮಟ್ಟಕ್ಕೆ ಈ ಕವಿ ಪುಂಜರ ಪರಿಚಯವಿದೆ, ಸಾಹಿತ್ಯ ಸಂಪತ್ತಿನ ಅರಿವಿದೆ ಎಂಬುದು ಸಹ ನಮ್ಮ ಮುಂದಿರುವ ಪ್ರಶ್ನೆಯೇ ಅಲ್ಲವೇ?
ಕನ್ನಡಕ್ಕೆ ಶಾಸ್ತ್ರೀಯ ಸ್ಥಾನ ಸಿಗುವುದೂ ಅಲ್ಲದೆ ಕನ್ನಡ ತಮಿಳಿಗಿಂತ ೨೦೦ ವರ್ಷ ಹಳೆಯದ್ದು, ತಮಿಳಿಗೆ ತೆಲುಗು ಸಾಹಿತ್ಯದ ಪ್ರಭಾವ ಕೂಡ ಇದೆ ಹಾಗೆಯೇ ಇವೆಲ್ಲದರ ಮೇಲೆ ದ್ರಾವಿಡ ಭಾಷೆಗೆ ಕನ್ನಡ ಲಿಪಿಯೇ ಆಧಾರ ಎನ್ನುವುದು ಕೂಡ ಸಾಬೀತಾಗುತ್ತದೆ.
ಸುವರ್ಣ ಕರ್ನಾಟಕದ ಚಿನ್ನದ ಕಿರೀಟಕ್ಕೆ ಮತ್ತೊಂದು ವಜ್ರ ಖಚಿತಗೊಂಡಂತೆಯೇ ಅಲ್ಲವೇ.
ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್ಕ್ಕಿಸಿ
——————-ಜೈ ಕರ್ನಾಟಕ . ಜೈ ಭುವನೇಶ್ವರಿ——————
——————–ಕನ್ನಡವೇ ಸತ್ಯ ಕನ್ನಡವೇ ನಿತ್ಯ——————-
ಮಾಹಿತಿಯ ಮೂಲ: ಕನ್ನಡಪ್ರಭ

